ಶುಭಬೆಳಗು, ಗೆಳೆಯರೇ, ಇಂದಿನ ವಿಜಯವಾಣಿ ದಿನಪತ್ರಿಕೆಯ ಶುಭನುಡಿ "ಸಂಬಂಧಗಳು ವಿದ್ಯುತ್ ಸಂಪರ್ಕದಂತೆ, ಹೆಚ್ಚು ಕಡಿಮೆ ಆದರೆ ಅಪಘಾತ, ಸರಿಯಿದ್ದರೆ ಬೆಳಕು. ಸದಾ ಸಂಪರ್ಕ ಸರಿಯಿರಲಿ." ಸೂಪರ್ ಅಲ್ವಾ, ಸಂಬಂಧಗಳು ಸೂಕ್ಷ್ಮ ಅವುಗಳ ನಿರ್ವಹಣೆ ಇನ್ನೂ ಸೂಕ್ಷ್ಮವಾಗಿರಲೇಬೇಕು. ಜೋರಾಗಿ ಎಳೆದರೆ ಅರಿಯುತ್ತದೆ ಪೂರ್ತಿ ಬಿಟ್ಟುಬಿಟ್ಟರೆ ದಾರಿ ತಪ್ಪುತ್ತದೆ. ಸಂಬಂಧ ಎನ್ನುವುದು ಕೇವಲ ಗಂಡ ಹೆಂಡತಿಯ ನಡುವಿರುವುದು ಎಂದು ಮಾತ್ರ ತಿಳಿಯುವಂತಿಲ್ಲ. ಮಕ್ಕಳು-ತಂದೆ,ತಾಯಿ, ಮಕ್ಕಳು - ಮನೆಯಲ್ಲಿರುವ ಹಿರಿಯರು. ವಿದ್ಯಾರ್ಥಿ-ಶಿಕ್ಷಕ/ಕಿ, ಗೆಳೆಯರು,ಗೆಳತಿಯರು,ಪ್ರೇಮಿಗಳು, ಅಧಿಕಾರಿಗಳು ಹೀಗೆ ಹೇಳುತ್ತಾ ಹೋದರೆ ಬಹಳಷ್ಟು ಬಹಳಷ್ಟು ಇವೆ. ಸರಿ ಯಾವುದೇ ಸಂಬಂಧವಾದರೂ ಒಂದು ಸಮತೋಲನದ ಮೇಲೆ ನಿಂತಿರುತ್ತದೆ. ಸಮತೋಲನ ತಪ್ಪಿತೋ ಸಂಬಂಧ ಕೆಟ್ಟಿತೆಂದೇ ಅರ್ಥ. ಒಡೆದು ಹೋದ ಕನ್ನಡಿಯನ್ನು ಬೇಕಾದರೆ ಒಂದು ಮಾಡಬಹುದು(ಕತ್ತರಿಸಿ ಹೋದ ರುಂಡವನ್ನೇ ಮತ್ತೆ ಜೋಡಿಸಿ ಜೀವ ಕೊಟ್ಟ ಉದಾಹರಣೆ ಇಂದಿನ ಪತ್ರಿಕೆಯಲ್ಲಿದೆ , ನಮ್ಮ ವಿಜ್ಞಾನ ಜಗತ್ತಿಗೆ ಒಡೆದ ಕನ್ನಡಿ ಜೋಡಿಸುವುದೇನು ಕಷ್ಟವಲ್ಲ ಬಿಡಿ) ಆದರೆ ಒಡೆದ ಸಂಬಂಧ ಜೋಡಿಸಲಾಗದು. ಒಂದು ವೇಳೆ ಕೂಡಿಸಿದರು ಅದು ಮೊದಲಿನಂತಿರದು. ಸಂಬಂಧ ಕೆಡಲು, ಹಾಳಾಗಲು ಹಲವು ಕಾರಣಗಳಿರಬಹುದು. ನಾನೇ ಗ್ರೇಟ್ ಅನ್ನೋ ಈಗೋ ಬಂದರೆ, ನಾ ಹೇಳಿದ್ದನ್ನೇ ಕೇಳಬೇಕು ಎಂಬ ಸೂಪರ್ ಈಗೋ ನಮ್ಮಲ್ಲಿ ಹರಿದಾಡಿದರೆ, ಮಾತು ಎಲ್ಲೆ ಮೀರಿ ಹರಿದಾಡಿದರೆ, ಒಬ್ಬರು ಇನ್ನೊಬ್ಬರನ್ನು ತಮ್ಮ ಹಿಂಬಾಲಕರಂತೆ ಕಂಡರೆ, ಜೊತೆಯಲ್ಲಿದ್ದುಕೊಂಡೆ ಭಾವನೆಗಳ ಹಂಚಿಕೆಯಾಗದಿದ್ದರೆ, ನಂಬಿಕೆಗಳು ಅರ್ಥಕಳೆದುಕೊಂಡರೆ ಹೀಗೆ ಇನ್ನೂ ಏನೇನೋ ಆಗಿ ಸಂಬಂಧ ಹದಗೆಟ್ಟಾಗ ಅದರ ರಿಪೇರಿ ಮಾಡುವ ಕೆಲಸವಿದೆಯಲ್ಲ ಅದು ಯಾವ ಮೆಕ್ಯಾನಿಕ್ ನಿಗೂ ಸಾಧ್ಯವಾಗದ ಮಾತು. ಅದಕ್ಕೆ ಹಳಸುವ ಮೊದಲೇ ಸಂಬಂಧವನ್ನು ಉಣ್ಣಬೇಕಾದ ಅಗತ್ಯತೆ ಇದೆ. ಕಡಿದುಹೋಗುವ ಮೊದಲೇ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ. ಸತ್ತು ಹೋಗುವ ಮೊದಲೇ ನನ್ನ ಪ್ರೀತಿಯ ತೋಡಿಕೊಳ್ಳಬೇಕಿದೆ, ಸಂಬಂಧ ಮುದುಡುವ ಮೊದಲೇ ನನ್ನ ಈಗೋ/ಸೂಪರ್ ಇಗೋ ಹೊರಹೋಗಬೇಕಿದೆ. ಸಂಬಂಧ ಶಾಶ್ವತ ಅದಕ್ಕೆ ಬುನಾದಿ ಅವಶ್ಯಕ. ಶುಭೋದಯ.
Tuesday, October 6, 2015
Subscribe to:
Post Comments (Atom)
anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23
anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 : ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...
-
ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನ. """""""""""""""""...
-
Monday, 9 December 2013 ಮೌರ್ಯರು ಮತ್ತು ಕುಶಾನರು ಮೌರ್ಯ ಸಾಮ್ರಾಜ್ಯಮೌರ್ಯ ಸಾಮ್ರಾಜ್ಯಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ.ಕ್ರಿ.ಪೂ. ೩೨೧ ರಿ೦ದ...
-
ಸಮಾಜ ವಿಜ್ಞಾನ: 8ನೇ ತರಗತಿ ಸಮಾಜ ವಿಜ್ಞಾನ ವಿಷಯದ ಪಿಪಿಟಿಗಳು : ಇತಿಹಾಸ ಆಧಾರಗಳು ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಭಾಗ1 ಮತ್ತು ಭಾಗ2 ಭಾ...
-
ಸ್ಪರ್ಧಾಲೋಕ : ★ ಸಾಮಾನ್ಯ ಜ್ಞಾನ (ಭಾಗ - 10) General Knowledge (Part-10): - 10 ): 1) ಬ್ರಾಡ್ ಗೇಜ್ ಹಳಿಯ ದೂರ ಎಷ್ಟು?— 1676 mm.2) ಒಂದನೇ ಪಾಣಿಪಟ್ ಕ...
-
MEDIEVAL HISTORY (ಮಧ್ಯಯುಗದ ಇತಿಹಾಸ) PagesDEC6 ವಿಜಯನಗರ ಸಾಮ್ರಾಜ್ಯ ವಿಜಯ ನಗರ ಸಾಮ್ರಾಜ್ಯಸಂಗಮ ವಂಶ1. 1 ನೇ ಹರಿಹರ - 1336 – 13562. 1 ನೇ ಬುಕ್ಕ - 1...
-
Thursday, 4 December 2014 ಬಾದಾಮಿ ಚಾಲುಕ್ಯರು ಬಾದಾಮಿ ಚಾಲುಕ್ಯರು ಬಾದಾಮಿ ಚಾಲುಕ್ಯರುಪ್ರಸ್ತುತ ಬಾದಮಿಯು - ಇಂದಿನ ಬಾಗಲಕೋಟ ಜಿಲ್ಲೆಯಲ್ಲಿದೆಚಾಲುಕ್ಯರ ರಾ...
-
ಮರಾಠರು (1649-1748) (99 ವರ್ಷ ಆಳ್ವಿಕೆ) ಹಿನ್ನಲೆ: ಮರಾಠರ ರಾಜಕೀಯ: 1. ಶಾಹಾಜಿ ಭೋಸ್ಲೆ : 2. ಶವಾಜಿ : (1627-1680) ಶಿವಾಜಿ ಜನನ: 1627ತೋರಣ ಕೋಟೆ ವ...
-
ANCIENT HISTORY(ಪ್ರಾಚೀನ ಇತಿಹಾಸ) Home HISTORY CCE ಚಿಂತಕರ ಚಾವಡಿ ಭೂಗೋಳಶಾಸ್ತ್ರ. ▼ Friday, 5 December 2014 ಹೊಯ್ಸಳರು ಹೊಯ್ಸಳರು :- 25. ಹ...
-
Thursday, 4 December 2014 ಬೌದ್ಧ ಧರ್ಮ ಬೌದ್ಧ ಧರ್ಮಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿಬೌದ್ಧ ಧರ್ಮದ ಸ್ಥಾಪಕ - ----- ಗೌತ...
-
BHAMA: ಪ್ರಮುಖ ದಿನಾಚರಣೆಗಳು : ನಮ್ಮ ಶಾಲೆಗಳಲ್ಲಿ ಆಚರಿಸಬಹುದಾದ ಪ್ರಮುಖ ದಿನಾಚರಣೆಗಳು( ರಾಷ್ಟ್ರೀಯ & ಅಂತರಾಷ್ಟ್ರೀಯ) ಕ್ರ . ಸ...
No comments:
Post a Comment