Thursday, September 17, 2015

ಚಿಂತನೆ

ಶುಭಬೆಳಗು, ಗೆಳೆಯರೇ, ಮನುಷ್ಯನು ಅದೃಷ್ಟ ಹಾಗೂ ದುರಾದೃಷ್ಟಗಳ ನಡುವಿನ ಕೈಗೊಂಬೆಯಾಗಿರುತ್ತಾನೆ. ಅದೃಷ್ಟವಿದ್ದಾಗ ಮುಟ್ಟಿದುದೆಲ್ಲವೂ ಬಂಗಾರವಾಗುತ್ತದೆ ಅದೇ ಅದೃಷ್ಟ ಕಳಚಿಕೊಂಡರೆ ಬಂಗಾರವೂ ಕೂಡಾ ಮಣ್ಣಾಗುತ್ತದೆ. ಅದಕ್ಕೆ ಸರ್ವಜ್ಞ ಹೇಳಿದ್ದು "ಬಲಹೋದ ಕಾಲಕ್ಕೆ ನೆಲವೆದ್ದು ಬಡಿಯುವುದು, ಕುಲಛಲವು ಕಲಹ ಸುರಿಯುವ ಸಂಗ್ರಾಮಗಳು, ಬಲವಿರುವತನಕ ಸರ್ವಜ್ಞ" ಬಲಹೋದ ಕಾಲವೆಂದರೆ ಅದೇ ನಮ್ಮ ಅದೃಷ್ಟ ನಮ್ಮ ಕೈ ಬಿಟ್ಟಾಗ ಏನೂ ನಮ್ಮೊಂದಿಗಿರದು. ಆಪ್ತ ಮಿತ್ರರೇ ಪರಮ ಶತ್ರುಗಳಾಗುತ್ತಾರೆ ಒಡಹುಟ್ಟಿದವರೇ ಪರಮ ಘಾತುಕರಾಗುತ್ತಾರೆ . ನಮಗದೃಷ್ಟವಿದ್ದಾಗ ನಾವು ಮಾಡುವ ಕಾರ್ಯಕ್ಕೆ ಸಮುದ್ರವೇ ದಾರಿ ಮಾಡಿಕೊಡುತ್ತದೆ ಆದರೆ ನಮ್ಮ ದುರಾದೃಷ್ಟ ಎದುರಾದಾಗ ಸಣ್ಣ ಕೆಲಸವೇ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. "ಸಂದವರ ಸುಡುವರಾ ಬೆಂದವರ ಬಯ್ಯುವರು, ಬಂಧುಗಳು ಎದ್ದು ಬಡಿಯುವರು ವಿಧಿ ಕೂಡಿ ಬಂದಕಾಲಕ್ಕೆ ಸರ್ವಜ್ಞ" ಎನ್ನುತ್ತಾನೆ ಸರ್ವಜ್ಞ. ಎಂಥಾ ದೊಡ್ಡ ವ್ಯಕ್ತಿಗಳೂ ಕೂಡಾ ತಪ್ಪು ಮಾಡದಿದ್ದರೂ ಅವಮಾನಿತರಾಗಿದ್ದಂತಹ ಉದಾಹರಣೆಗಳಿವೆ. ಕೋಟ್ಯಾಧಿಪತಿಯಿದ್ದವನು ಅಕ್ಷರಶಃ ಬೀದಿಗೆ ಬಿದ್ದ ಉದಾಹರಣೆಗಳಿವೆ.ಹೌದು ಹಣವಿದ್ದಾಗ ಸಂಪತ್ತು ಇದ್ದಾಗ ಬಂಧು ಬಾಂಧವರುಂಟು, ಅದಿಲ್ಲದೇಡೇ ಏನೂ ಇಲ್ಲ ಎಲ್ಲವೂ ಶ್ಯೂನ್ಯ. ಆದರೆ ಬರೀ ಅದೃಷ್ಟವನ್ನೇ ನಂಬಿ ಕುಳಿತಿದ್ದರೆ ರತನ್ ಜಿ ಟಾಟಾರಂತಹ ವ್ಯಕ್ತಿ ನಮ್ಮ ಮುಂದೆ ಇರುತ್ತಿರಲಿಲ್ಲ ಅಲ್ಲವೇ? ಅದಕ್ಕೆ ಹೇಳುವುದು ಕಾಲವೇ ಎಲ್ಲಕ್ಕೂ ಕಾರಣ ಮತ್ತು ಉತ್ತರ. ಶುಭೋದಯ. ಶ್ರೀ ಲಕ್ಷ್ಮೀಕಾಂತ ಡಿ ಮಮದಾಪೂರ. ಬಿ ಆರ್ ಪಿ, ಬಿ ಆರ್ ಸಿ,  ಮುಧೋಳ.9741102353

No comments:

Post a Comment

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...