ಭಾರತ ರತ್ನ ಪಡೆದ ಹಿನ್ನೆಲೆಯಲ್ಲಿ ಮದನ ಮೋಹನ ಮಾಳವೀಯವರ ಒಂದು ನೆನಪು
ಮದನ ಮೋಹನ ಮಾಳವೀಯಜನನ :1861 ಡಿಸೆಂಬರ್ 25ಅಲಹಾಬಾದ್, ಭಾರತಮರಣ: 1946 ನವೆಂಬರ್ 12 (84 ನೇ ವಯಸ್ಸಿನಲ್ಲಿ)ವಾರಣಾಸಿಯಲ್ಲಿರಾಷ್ಟ್ರೀಯತೆ: ಭಾರತೀಯರಾಜಕೀಯ ಪಕ್ಷ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಓದು: ಅಲಹಾಬಾದ್ ವಿಶ್ವವಿದ್ಯಾಲಯ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಉದ್ಯೋಗ: ಶಿಕ್ಷಣ, ಪತ್ರಕರ್ತ ಮತ್ತು ಸ್ವಾತಂತ್ರ್ಯಚಳುವಳಿ ಕಾರ್ಯಕರ್ತಉಪಕುಲಪತಿಗಳು:1919-1938 ರಿಂದ- ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಧರ್ಮ: ಹಿಂದೂ ಧರ್ಮಪ್ರಶಸ್ತಿಗಳು: ಭಾರತ ರತ್ನ 2014 (ಮರಣೋತ್ತರ)ಮದನ ಮೋಹನ ಮಾಳವೀಯ(೧೮೬೧-೧೯೪೬) ಭಾರತ ಸ್ವಾತಂತ್ರ ಚಳುವಳಿಯಲ್ಲಿ ರಾಷ್ಟ್ರೀಯ ನಾಯಕರಾಗಿದ್ದರು. ಇವರು ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ಸಂಸ್ಥಾಪಿಸಿದರು.ಅದರ ಉಪಕುಲಪತಿಗಳಾಗಿದ್ದರು * ಮಾಲವೀಯ ಭಾರತದಲ್ಲಿ ಸ್ಕೌಟಿಂಗ್ ಸ್ಥಾಪಕರಲ್ಲಿ ಒಬ್ಬರು. ಇವರನ್ನು ಭಾರತದ ಜನತೆ ಮಹಾತ್ಮ ಎಂದು ಕರೆದರು. ಅಲಹಾಬಾದ್ನ ಪ್ರಯಾಗ್ ನಲ್ಲಿ ಡಿಸೆಂಬರ್ ೨೫ ೧೮೬೧ರಂದು ಜನಿಸಿದರು.ಮದನ ಮೋಹನ ಮಾಳವೀಯ ಅವರಿಗೆ "ಭಾರತ ರತ್ನ' ಗೌರವದಿ.25-12-2014 ರಂದು ಹಿಂದೂ ರಾಷ್ಟ್ರೀಯತೆಯ ಪ್ರತಿಪಾದಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮದನ ಮೋಹನ ಮಾಳವೀಯ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.ಶಿಕ್ಷಣ ತಜ್ಞರೂ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆಮಾಡಿದವರೂ ಆದ ಶ್ರೀ ಮದನ ಮೋಹನ ಮಾಳವೀಯ ಅವರ 153ನೇ ಜನ್ಮ ವರ್ಷ(1861ರ ಡಿ.25ರಂದು ಜನನ) ಅವರಿಗೆ ಮರಣೋತ್ತರವಾಗಿ ಈ ಪುರಸ್ಕಾರ ನೀಡಲಾಯಿತು.ಜೀವನಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣತಜ್ಞ, ಬಹುಮುಖ ವ್ಯಕ್ತಿತ್ವದ ಪ್ರತಿಭೆ ಮದನ ಮೋಹನ ಮಾಳವೀಯ. ಸ್ವಾತಂತ್ರ್ಯ ಹೋರಾಟದ ವೇಳೆ ಸೌಮ್ಯವಾದಿಗಳು ಮತ್ತು ತೀವ್ರವಾದಿಗಳ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸಿದವರು.ಮಾಳವೀಯರ ಕಾರ್ಯ ಬಹುವಾಗಿ ನೆನಪಾಗುವುದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆಯ ಮೂಲಕ. ಹಿಂದೂ ರಾಷ್ಟ್ರೀಯವಾದದ ಅನುಯಾಯಿಯಾಗಿ, ಸ್ವತಃ 'ಹಿಂದೂ ಮಹಾಸಭಾ'ವನ್ನು ಕಟ್ಟಿದ ಮಾಳವೀಯರು, ಸಮಾಜ ಸುಧಾರಣೆಗೂ ಅಪಾರವಾಗಿ ಶ್ರಮಿಸಿದವರು.1861, ಡಿ.25ರಂದು ಅಲಹಾಬಾದ್‌ನ ಸಾಂಪ್ರದಾಯಿಕ ಹಿಂದೂ ಮನೆತನದಲ್ಲಿ ಜನಿಸಿದ ಮಾಳವೀಯರು, 1861ರಲ್ಲಿ ಅಲಹಾಬಾದ್ ಜಿಲ್ಲಾ ಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಆದರೆ ಬಳಿಕ ವಿದ್ಯಾಭ್ಯಾಸ ಮುಂದುವರಿಸುವ ದೃಷ್ಟಿಯಿಂದಾಗಿ ಅವರು ವೃತ್ತಿಯನ್ನು ತೊರೆದರು. ಬಳಿಕ ಕಾನೂನು ಕಲಿತ ಮಾಳವೀಯರು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನೂ ನಡೆಸಿದರು.ಭಾರತೀಯ ಕಾಂಗ್ರೆಸ50 ವರ್ಷಗಳ ಕಾಲ ಭಾರತೀಯ ಕಾಂಗ್ರೆಸ್ಸಿನ ಸದಸ್ಯರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ದಿಗ್ದರ್ಶಕರಾಗಿದ್ದವರು. 1909(ಲಾಹೋರ್), 1918(ದೆಹಲಿ), 1930 (ದೆಹಲಿ), 1932(ಕೋಲ್ಕತಾ) ಕಾಂಗ್ರೆಸ್ ಅಧಿವೇಶನಗಳಲ್ಲಿ ಮಾಳವೀಯರು ಅಧ್ಯಕ್ಷರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾದ ಗೋಪಾಲ ಕೃಷ್ಣ ಗೋಖಲೆ ಮತ್ತು ಸಮಾಜ ಸುಧಾರಕರೂ ಆದ ಬಾಲಗಂಗಾಧರ ತಿಲಕರ ಅನುಯಾಯಿಯಾಗಿದ್ದವರು ಮಾಳವೀಯರು.1930ರಲ್ಲಿ ಮಹಾತ್ಮಾ ಗಾಂಧಿಯವರು ಉಪ್ಪಿನ ಸತ್ಯಾಗ್ರಹ ಮತ್ತು ಕಾನೂನು ಭಂಗ ಚಳವಳಿಗೆ ಕರೆ ನೀಡಿದ್ದು, ಮಾಳವೀಯರು ಸಕ್ರಿಯವಾಗಿ ಭಾಗಿಯಾಗಿದ್ದರು. ಪರಿಣಾಮ ಅವರನ್ನು ಬ್ರಿಟಿಷರು ಬಂಧಿಸಿ ಜೈಲಿಗಟ್ಟಿದರು.ಸ್ವಾತಂತ್ರ್ಯ ಹೋರಾಟಕ್ಕೆ ಮಾಳವೀಯರ ಕೊಡುಗೆಯನ್ನು ಗೋಖಲೆಯವರು ಒಂದೆಡೆ ಹೀಗೆ ನೆನೆಯುತ್ತಾರ'ಮಾಳವೀಯರು ನಿಜವಾದ ತ್ಯಾಗ ಜೀವಿ. ಕೈತುಂಬ ಸಂಬಳ, ಐಷಾರಾಮದ ಜೀವನ ನಡೆಸಬಹುದಾಗಿದ್ದ ಅವರು ದೇಶದ ಕಷ್ಟನಿವಾರಣೆಗೆ ಜೀವನ ಮುಡುಪಿಟ್ಟವರು . ಆದರೆ ಹೋರಾಟದ ಜೀವನ ಅವರನ್ನು ಬಡತನಕ್ಕೆ ನೂಕಿತು.ಮಾಳವೀಯರು ಪತ್ರಕರ್ತರೂ ಆಗಿದ್ದರು. 1909ರಲ್ಲಿ ಅಲಹಾಬಾದ್‌ನಲ್ಲಿ ಇಂಗ್ಲಿಷ್ ಪತ್ರಿಕೆ 'ದಿ ಲೀಡರ್' ಆರಂಭಿಸಿದರು. ಸಮಾಜಪರ, ಸ್ವಾತಂತ್ರ್ಯ ಹೋರಾಟಕ್ಕೆ ಪ್ರೋತ್ಸಾಹಕರವಾದ ವಿಚಾರಗಳನ್ನು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು.ಅವರು 1903ರಿಂದ 1918ರವರೆಗೆ ಅಲಹಾಬಾದ್ ನಗರ ಪಾಲಿಕೆಯ ಸದಸ್ಯರಾಗಿ, ಪ್ರಾದೇಶಿಕ ಶಾಸಕಾಂಗ ಸಮಿತಿಯ ಸದಸ್ಯರಾಗಿ ಮಾಳವೀಯರು ಸೇವೆ ಸಲ್ಲಿಸಿದ್ದರು. ಕೇಂದ್ರೀಯ ಸಮಿತಿಯ ಸದಸ್ಯರಾಗಿ 1910ರಿಂದ 1920ರವರೆಗೆ, ಭಾರತೀಯ ಶಾಸನ ಸಭೆಯ ಸದಸ್ಯರಾಗಿ 1916ರಿಂದ 1918ರವರೆಗೆ ಸೇವೆ ಸಲ್ಲಿಸಿದ್ದರು. 1931ರಲ್ಲಿ ದುಂಡು ಮೇಜಿನ ಸಭೆಗೂ ಹಾಜರಾಗಿದ್ದರು.1937ರಲ್ಲಿ ಸಕ್ರಿಯ ರಾಜಕೀಯವರನ್ನು ತೊರೆದ ಅವರು ಬಳಿಕ ಸಮಾಜ ಸುಧಾರಣೆಯತ್ತ ಗಮನ ಕೇಂದ್ರೀಕರಿಸಿದರು. ಮಹಿಳೆಯರ ಶಿಕ್ಷಣ, ವಿಧವಾ ವಿವಾಹ, ಬಾಲ್ಯವಿವಾಹ, ಡಾಂಭಿಕ ಆಚರಣೆಗಳ ವಿರುದ್ಧ ದನಿಎತ್ತಿದರು.ಅವರು1946 ನ.12ರಂದು ಅವರು ನಿಧನ ಹೊಂದಿದರು.ಗಾಂಧೀಜಿ ಅಭಿಪ್ರಾಯಗಾಂಧೀಜಿಗೆ ಅಚ್ಚುಮೆಚ್ಚುಮಹಾತ್ಮ ಗಾಂಧಿ ಅವರು ಅತಿ ಹೆಚ್ಚು ಗೌರವ ಹೊಂದಿದ್ದ ಮೂವರಲ್ಲಿ ಮಾಳವೀಯ ಒಬ್ಬರು. ತಿಲಕ್ ಮತ್ತು ಗೋಖಲೆ ಇತರ ಇಬ್ಬರು. ಲಂಡನ್‌ನಲ್ಲಿ ನಡೆದ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿ ಅವರೊಂದಿಗೆ ಭಾಗವಹಿಸಿದ್ದರು. ಖುದ್ದು ಸಂಸ್ಕೃತ ವಿದ್ವಾಂಸರು, ಆದರೆ, ಇಂಗ್ಲಿಷ್ ಮೇಲೆ ಅಷ್ಟೇ ಪ್ರಭುತ್ವ ಹೊಂದಿದವರು. ಅಲ್ಲಿ ನೀಡಿದ ಭಾಷಣದೊಂದಿಗೆ ಬ್ರಿಟಿಷರನ್ನು ಅಚ್ಚರಿಗೊಳಿಸಿದರು. ಆಕ್ಸ್‌ಫರ್ಡ್, ಕೇಂಬ್ರಿಜ್‌ನಲ್ಲಿ ಓದದಿದ್ದರೂ ಇಂಗ್ಲಿಷ್ ಮೇಲೆ ಹೊಂದಿರುವ ಹಿಡಿತದ ಬಗ್ಗೆ ಬಹಿರಂಗವಾಗಿ ಪ್ರಶಂಸೆ ವ್ಯಕ್ತಪಡಿಸಿದರಂತೆ ಬ್ರಿಟನ್‌ನ ರಾಜಕಾರಣಿಗಳು. ಭಾರತೀಯ ಶಾಸನಸಭೆಯ ಸದಸ್ಯರಾಗಿದ್ದ ಮಾಳವೀಯ ಅವರು ಜಲಿಯನ್‌ವಾಲಾಭಾಗ್ ಹತ್ಯಾಕಾಂಡವನ್ನು ಅತ್ಯುಗ್ರವಾಗಿ ಖಂಡಿಸಿದರು. ಅವರನ್ನು ಹಿಂದೂ ರಾಷ್ಟ್ರೀಯವಾದಿ ಎಂದು ಗುರುತಿಸಿದರೂ ಸಂಪ್ರದಾಯಸ್ಥ ಹಿಂದು ಎನಿಸಿಕೊಂಡರೂ ಬದಲಾವಣೆಗೆ ಸದಾ ತೆರೆದುಕೊಂಡಿದ್ದರು. ಇದರಿಂದಾಗಿಯೇ ಮಹಾಮನ ಎಂದು ಕರೆಸಿಕೊಂಡಿದ್ದರು. ಅಸ್ಪಶ್ಯತೆ ನಿವಾರಣೆಗೂ ಶ್ರಮಿಸಿದರು. ಇತರ ಧರ್ಮೀಯರ ಜತೆಗೂಡಿ ಹೋರಾಡಿದರೆ ಮಾತ್ರ ಸ್ವಾತಂತ್ರ ಸಿದ್ಧಿಸಲಿದೆ ಎನ್ನುವ ನಂಬಿಕೆ ಹೊಂದಿದ್ದದರು
No comments:
Post a Comment