Thursday, December 4, 2014


ANCIENT HISTORY(ಪ್ರಾಚೀನ ಇತಿಹಾಸ)
 ▼
Tuesday, 2 December 2014
ಕದಂಬರು

ಕದಂಬರು
ಕರ್ನಾಟಕದಲ್ಲಿ ಮೊದಲು ಹುಟ್ಟು ಹಾಕಿದ ಕನ್ನಡ ಸಾಮ್ರಾಜ್ಯ - ಕದಂಬರು .

ಕದಂಬರು ಆಳಿದ್ದ ಕ್ರಿ.ಶ.4 ನೇ ಶತಮಾನದಿಂದ 6 ನೇ ಶತಮಾನದವರೆಗೆ

ಕದಂಬರ ರಾಜಧಾನಿ - ಬನವಾಸಿ .

ಬನವಾಸಿ ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಉತ್ತರ ಕನ್ನಡ .

ಕದಂಬರ ವಂಶದ ಸ್ಥಾಪಕ ದೊರೆ - ಮಯೂರ ವರ್ಮ .

ಕದಂಬರ ಲಾಂಛನ - ಸಿಂಹ .

ಕದಂಬರ ಧ್ವಜ - ವಾನರ .

ಮಹಾಭಾರತ ಕಾಲದಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು - ವೈಜಯಂತಿ ಅಥವಾ ವನವಾಸಿ .

ಟಾಲೆಮಿಯು ತನ್ನ ಕೃತಿ Geography ಯಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆದಿದ್ದಾನೆ - ಬೈಜಾಂಟಿಯನ್ .

ಕದಂಬರ ಮೂಲ

A . ದೈವಾಂಶ ಸಿದ್ದಾಂತ

b. ನಾಗ ಸಿದ್ದಾಂತ

c. ಜೈನ ಸಿದ್ದಾಂತ

d.ನಂದಾ ಮೂಲ

e. ತಮಿಳು ಮೂಲ

f. ಕನ್ನಡ ಮೂಲ




ಕದಂಬರ ಮೂಲ ಪುರುಷ - ಮಯೂರ ವರ್ಮ .

ಮಯೂರವರ್ಮನ ತಂದೆಯ ಹೆಸರು - ವೀರಶರ್ಮ .

ಮಯೂರವರ್ಮನ ಗುರುವಿನ ಹೆಸರು - ವೀರಶರ್ಮ .

ಮಯೂರವರ್ಮನನ್ನ ಅವಮಾನಿಸಿದ ಕಂಚಿಯ ಪಲ್ಲವ ದೊರೆ - ಶಿವಸ್ಕಂದ ವರ್ಮ .

ಚಂದ್ರವಳ್ಳಿ ಶಾಸನದ ಕರ್ತೃ - ಮಯೂರವರ್ಮ

ಚಂದ್ರವಳ್ಳಿಯ ಬಳಿ ಕೆರೆಯನ್ನು ನಿರ್ಮಿಸಿದ ಕದಂಬ ದೊರೆ - ಮಯೂರವರ್ಮ

ಮಯೂರವರ್ಮನ ಸೈನಿಕ ಸಾಧನೆಯನ್ನು ತಿಳಿಸುವ ಶಾಸನ - ಚಂದ್ರವಳ್ಳಿ ಶಾಸನ .

ಕರ್ನಾಟಕದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅರಸ - ಮಯೂರವರ್ಮ

ಮಯೂರವರ್ಮನ ನಂತರ ಕದಂಬ ವಂಶವನ್ನು ಆಳಿದವರು - ಕಂಗವರ್ಮ .

ಧರ್ಮರಾಜ , ಧರ್ಮಮಹಾರಾಜ ಎಂಬ ಬಿರುದನ್ನು ಧರಿಸಿದ್ದ ಕದಂಬ ದೊರೆ - ಕಾಕುಸ್ಥವರ್ಮ .

ಕನ್ನಡದ ಮೊಟ್ಟ ಮೊದಲ ಶಾಸನ - ಹಲ್ಮಿಡಿ ಶಾಸನ .

ಹಲ್ಮಿಡಿ ಶಾಸನದ ಕರ್ತೃ - ಕಾಕುಸ್ಥವರ್ಮ .

ತಾಳಗುಂದ ಶಾಸನದ ಕರ್ತೃ - ಕಾಕುಸ್ಥವರ್ಮ .

ಕದಂಬರ ರಾಜ್ಯಾಡಳಿತದಲ್ಲಿ ರಾಜನಿಗೆ ಆಡಳಿತದಲ್ಲಿ ಸಹಾಯ ಮಾಡುತ್ತಿದ್ದ ಮಂತ್ರಿಮಂಡಳವನ್ನು ಈ ಹೆಸರಿನಿಂದ ಕರೆಯುವರು - ಪಂಚಪ್ರಧಾನರು .

ಪ್ರಧಾನ ಮಂತ್ರಿ - ಪ್ರಧಾನ

ಅರಮನೆಯ ವ್ಯವಹಾರಗಳ ಮಂತ್ರಿ - ಮನೆಸೇರ್ಗಡೆ .

ವಿದೇಶಾಂಗ ವ್ಯವಹಾರಗಳ ಮಂತ್ರಿ - ತಂತ್ರ ಪಾಲ .

ತಾಂಬೂಲ ಪಾರು ಪತ್ಯಗಾರ - ಕ್ರಮುಖ ಪಾಲ .

ಮಂತ್ರಿಮಂಡಲದ ಪ್ರಧಾನ ಕಾರ್ಯ ದರ್ಶಿ - ಸಭಾಕಾರ್ಯ ಸಚಿವ .

ಕದಂಬರ ಆಡಳಿತದಲ್ಲಿ ಜಿಲ್ಲೆಯ ಮುಖ್ಯಸ್ಥನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಮನ್ನೇಯ .

ಪಟ್ಟಣ್ಣದ ಾಡಳಿತ ನೋಡಿಕೊಳ್ಳುತ್ತಿದ್ದವನು - ಪಟ್ಟಣ್ಣ ಸ್ವಾಮಿ .

ಕದಂಬರು ಹೊರೆಗಳ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೇರ್ಜುಂಕ .

ವ್ಯಾಪಾರ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಬಿಲ್ ಕೊಡೆ .

ಸಾರಿಗೆ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕಿರುಕುಳ .

ಗೆರಿಲ್ಲಾಯುದ್ಧ ತಂತ್ರಕ್ಕೆ ಹೆಸರಾಗಿದ್ದ ದಕ್ಷಿಣ ಭಾರತದ ಮನೆತನ - ಕದಂಬರು .

ಕದಂಬರ ಕೂಟ ಯುದ್ದವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಗೆರಿಲ್ಲಾ .

ಕದಂಬರ ಸಮಾಜದಲ್ಲಿದ್ದ ಕುಟುಂಬ ಪದ್ದತಿ - ಮಾತೃ ಪ್ರಧಾನ , ಅವಿಭಕ್ತ ಕುಟುಂಬ ಪದ್ದತಿ .

ಕದಂಬ ಸಾಮ್ರಾಜ್ಯವು ಈ ಲಕ್ಷಮಗಳನ್ನು ಹೊಂದಿತ್ತು - ಭಾರತೀಕರಣ .

ಕದಂಬರು ಈ ಧರ್ಮದ ಅವಲಂಬಿಗಳು - ವೈದಿಕ ಧರ್ಮ .

ಕದಂಬರ ಕುಲದೇವರು - ತಾಳಗುಂದದ ಪ್ರಾಣೇಶ್ವರ .

ಕದಂಬರ ಮನೆಯ ದೇವರು - ಬನವಾಸಿಯ ಮಧಕೇಶ್ವರ .

ಕದಂಬರ ಕಾಲದಲ್ಲಿ ಬನವಾಸಿಗೆ ಆಗಮಿಸಿದ ಚೀನೀಯಾತ್ರಿಕ - ಹ್ಯೂಯನ್ ತ್ಸಾಂಗ್ .

ಕದಂಬರ ಮುಖ್ಯ ವೃತ್ತಿ - ವ್ಯವಸಾಯ .

ಕದಂಬರ ಕಾಲದ ಭ ಕಂದಾಯ ಪದ್ದತಿ - ಸರ್ವ ನಮಸ್ಯ , ತ್ರೀಬೋಗ , ಹಾಗೂ ತಾಳವೃತ್ತಿ.

ಕದಂಬರ ರೇವು ಪಟ್ಟಣ್ಣಗಳು - ಗೋವಾ , ಮಂಗಳೂರು , ಹೊನ್ನವರ , ಅಂಕೋಲ ಹಾಗೂ ಭಟ್ಕಳ

ಕದಂಬರ ವಿಶಿಷ್ಠ ಕೊಡುಗೆಗಳು - ನಾಣ್ಯ ಪದ್ದತಿ .

ಕದಂಬರು ಬಿಡುಗಡೆ ಮಾಡಿದ ಬೆಳ್ಳಿ ನಾಣ್ಯದ ಹೆಸರು - ಪದ್ಮಟಂಕ .

ಕದಂಬರ ಪ್ರಮುಖ ನಾಣ್ಯಗಳು - ಗದ್ಯಾಣ , ದ್ರುಮ್ಮ , ಪಮ , ಸುವರ್ಣ ,

ಕದಂಬರ ಕಾಲದ ಶಿಕ್ಷಣ ಪದ್ದತಿ - ಗುರುಕುಲ ಶಿಕ್ಷಮ ಪದ್ದತಿ ,

“ ಘಟಿಕ ಸಾಹಸಿ ” ಎಂಬ ಬಿರಿದನ್ನು ಪಡೆಯುತ್ತಿದ್ದವರು - ಘಟಕದಲ್ಲಿ ಓದಿದ ವಿಧ್ಯಾರ್ಥಿಗಳಿಗೆ .

ಇಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆ ಇತ್ತು - ಬಳ್ಳಿಗಾಮೆ , ತಾಳಗುಂದ , ಬನವಾಸಿ ಹಾಗೂ ಅಗ್ರಹಾರ .

ಕದಂಬರ ಕಾಲದ ಪ್ರಸಿದ್ದ ವಿದ್ಯಾ ಕೇಂದ್ರ - ಕಂಚಿ .

ಕದಂಬರ ಆರಂಭದ ಶಾಸನಗಳು ಈ ಭಾಷೆಯಲ್ಲಿದೆ - ಪ್ರಾಕೃತ .

ತಾಳಗುಂದ ಶಾಸನದ ಕರ್ತೃ - ಕವಿ ಕುಬ್ಜ ( ಶಾಂತಿ ವರ್ಮ ಬರೆಯಿಸಿದ )

“ ಮದನ ತಿಲಕ ” ಕೃತಿಯ ಕರ್ತೃ - ಚಂದ್ರರಾಜ .

ಚಂದ್ರ ಚೂಡಾ ಮಣಿ ಕೃತಿಯ ಕರ್ತೃ - ನಾಗವರ್ಮ .

“ ಸುಕುಮಾರ ಚರಿತೆ ” ಯ ಕರ್ತೃ - ಶಾಂತಿನಾಥ

“ ಕೌಂತಳೇಶ್ವರ ದೌತ್ಯಂ ” ಕೃತಿಯ ಕರ್ತೃ - ಎರಡನೇ ಕಾಳಿದಾಸ .

“ ಕದಂಬ ಶೈಲಿ ” ಎಂಬ ವಾಸ್ತುಶಿಲ್ಪ ಶೈಲಿಯನ್ನು ಸೃಷ್ಠಿಸಿದವರು - ಕದಂಬರು .

ಕದಂಬರ ಆರಂಭದ ರಚನೆ - ಮೃಗೇಶ ವರ್ಮನು ರಚಿಸಿದ ಜೈನ ಬಸದಿ .

ದಕ್ಷಿಣ ಭಾರತದಲ್ಲಿಯೆ ಮೊಟ್ಟ ಮೊದಲನೆಯ ಪ್ರಾಚೀನ ದೇವಾಲಯಗಳ ಕಲಾಕೃತಿ - ತಾಳಗುಂದದ ಪ್ರಣವೇಶ್ವರ ದೇವಾಲಯ .

ಹಲ್ಮಿಡಿ ಶಾಸನ ಈ ಜಿಲ್ಲೆಯಲ್ಲಿ ದೊರೆಯುತ್ತದೆ - ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ .

ಮಯೂರ ವರ್ಮನನ್ನು “ ದ್ವೀಜೋತಮ ” ನೆಂದು ತಿಳಿಸಿರುವ ಶಾಸನದ ಹೆಸರು - ಮಳವಳ್ಳಿ ಶಾಸನ .

ಕಂಚಿಯಿಂದ ಹೊರನಡೆದ ಮಯೂರವರ್ಮನು ಮೊದಲು ಶಸ್ತ್ರಸ್ತ್ರ ಪಡೆಯನ್ನು ಕಟ್ಟಿದ ಪ್ರದೇಶ - ಶ್ರೀ ಶೈಲ

“ಧರ್ಮ ಮಹಾರಾಜಾಧಿರಾಜ ” ಎಂಬ ಬಿರದ್ದನ್ನು ಹೊಂದಿದ್ದ ಕದಂಬರ ಅರಸ - ಕಂಗವರ್ಮ ಅಥಾವ ಕೊಂಗುಣಿ ವರ್ಮ .

ತಾಳಗುಂದ ಶಾಸನ ಈ ಜಿಲ್ಲೆಯಲ್ಲಿ ದೊರಕಿದೆ - ಶಿವಮೊಗ್ಗ .

ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಕದಂಬ ದೊರೆ - ಕಾಕುಸ್ಥವರ್ಮ .

ಮೃಗೇಶನ ಮತ್ತೊಂದು ರಾಜಧಾನಿ - ಹಲಸಿ .

ಕದಂಬರ ಪ್ರಾಂತ್ಯದ ಘಟಕಗಳು - ಕಂಪಣ .

ಟಂಕ ಹಾಗೂ ಗಧ್ಯಾಣ ಎಂಬ ನಾಣ್ಯಗಳನ್ನು ಚಲಾವಣಿಗೆ ತಂದ ಮೊದಲಿಗರು - ಕದಂಬರು .

ಚಂದ್ರವಳ್ಳಿಯ ಶಾಸನ ಈ ಜಿಲ್ಲೆಯಲ್ಲಿ ದೊರೆತಿದೆ - ಚಿತ್ರದುರ್ಗ .

ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ .

ಮಹಾಭಾರತದಲ್ಲಿ ಬನವಾಸಿಯನ್ನು ಈ ಹೆಸರಿನಿಂದಲೂ ಕರೆದ್ದಿದ್ದಾರೆ - ಕುಂತಲ ದೇಶ .

ಪ್ರಣವೇಶ್ವರನ ಹೆಸರಿನಲ್ಲಿ ಕೆರೆಯನ್ನ ಕಟ್ಟಿಸಿದ ದೊರೆ - ಕಾಕುಸ್ಥವರ್ಮ .

ಕದಂಬರು ಈ ನದಿಯ ದಡದಲ್ಲಿ ತಮ್ಮ ರಾಜ್ಯವನ್ನ ಸ್ಥಾಪಿಸಿದರು - ವರದಾ ನದಿ .

ತಾಳಗುಂದದ ಪ್ರಾಚೀನ ಹೆಸರು - ಸ್ಥಣ ಕುಂದೂರು

ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ

ಮಯೂರವರ್ಮನು ವಿಧ್ಯಾಭ್ಯಾಸಕ್ಕಾಗಿ ಹೋದ ವಿದ್ಯಾಕೇಂದ್ರ - ಕಂಚಿ

ಕದಂಬರ ಈ ದೊರೆಯನ್ನು ಕುಂತಳ ರಾಜ್ಯದ ಏಕಮಾತ್ರ ದೊರೆ ಎಂದು ಹೇಳಲಾಗಿದೆ - ಭಗೀರಥ ವರ್ಮ

ಗುಪ್ತರೊಂದಿಗೆ ವೈವೈಹಿಕ ಸಂಬಂಧ ಹೊಂದಿದ್ದ ಕದಂಬ ದೊರೆ - ಕಾಕುಸ್ಥ ವರ್ಮ

ಕದಂಬರ ಕೊನೆಯ ದೊರೆ - ಹರಿವರ್ಮ -

ಕದಂಬರ ಆಳ್ವಿಕೆಯನ್ನು ಕೊನೆಗಾಣಿಸಿದ ಸಾಮ್ರಾಜ್ಯ - ಬಾದಾಮಿ ಚಾಲುಕ್ಯರು

ತಾಳಗುಂದ ಶಾಸನವು ಈ ಅರಸರನ್ನು “ ಆಬರಣ ” ಎಂದು ಬಣ್ಣಿಸಿದೆ - ಕಾಕುಸ್ಥ ವರ್ಮ

ಹಲ್ಮಿಡಿ ಶಾಸನದ ಕಾಲ - ಕ್ರ.ಶ.450

No comments:

Post a Comment

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...